速報APP / 新聞與雜誌 / Mysore District Journalist Association -

Mysore District Journalist Association -

價格:免費

更新日期:2018-10-23

檔案大小:6.8M

目前版本:4.0

版本需求:Android 4.1 以上版本

官方網站:https://www.mdja.in

Email:vivaanweb@gmail.com

聯絡地址:RR Nagar, Bangalore

Mysore District Journalist Association - MDJA(圖1)-速報App

ಕರ್ನಾಟಕ ಪತ್ರಿಕೋದ್ಯಮ ಪರಂಪರೆಯಲ್ಲಿ ಮೈಸೂರಿನ ಪತ್ರಿಕಾರಂಗಕ್ಕೆ ತನ್ನದೇ ಆದ ವಿಶಿಷ್ಟವಾದ ಸ್ಥಾನವಿದೆ. ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ದೊರೆಯುವುದಕ್ಕಿಂತಲೂ ಮೊದಲು ಮೈಸೂರು ಪ್ರಾಂತ್ಯದಲ್ಲಿ ಸಕ್ರಿಯವಾಗಿದ್ದ ಪತ್ರಿಕೋದ್ಯಮದ ದಿಗ್ಗಜರು ಕನ್ನಡ ಪತ್ರಿಕಾರಂಗದ ಪರಂಪರೆಯನ್ನು ಘನತೆಯಿಂದ ಕಟ್ಟಿ ಬೆಳೆಸಿದ್ದಾರೆ.

ಅಂತೆಯೇ ಅಂದು `ಪತ್ರಿಕೋದ್ಯೋಗಿಗಳ ಸಂಘ‘ ಎಂಬ ಹೆಸರಿನಿಂದ ಆರಂಭಗೊಂಡು ಇಂದು `ಮೈಸೂರು ಜಿಲ್ಲಾ ಪತ್ರಕರ್ತರ ಸಂಘ’ವಾಗಿ ವಿಸ್ತಾರವಾಗಿ ಬೆಳೆದು ನಿಂತಿರುವ ಮೈಸೂರು ಸೀಮೆಯ ಪತ್ರಕರ್ತರ ಬಳಗ ಬೆಳೆದುಬಂದ ಪರಿಯೇ ಕುತೂಹಲಕಾರಿ.

Mysore District Journalist Association - MDJA(圖2)-速報App

ಮೈಸೂರು ನಗರದಲ್ಲಿ `ಪತ್ರಿಕೋದ್ಯೋಗಿಗಳ ಸಂಘ‘ ಪ್ರಾರಂಭವಾದುದು 1934ನೇ ಮಾರ್ಚ್ ತಿಂಗಳ 10 ರಂದು. ಸ್ಥಳೀಯ ಪತ್ರಿಕೋದ್ಯೋಗಿಗಳ ಹಾಗೂ ಪತ್ರಿಕೆಗಳ ಹಿತ, ಅಭ್ಯುದಯದ ಆಶಯವನ್ನಿಟ್ಟುಕೊಂಡು ಬೆಳೆಯುವುದೇ ಈ ಸಂಘದ ಉದ್ದೇಶವಾಗಿತ್ತು. ಈ ಮೂಲ ಸಂಘದ ಸ್ಥಾಪನೆಗೆ ಬುನಾದಿ ಹಾಕಿದವರೆಂದರೆ ಕೆ. ಜೀವಣ್ಣರಾವ್. ಇವರು ಮೈಸೂರು ನಗರದ ಸ್ಥಳೀಯರೊಂದಿಗೆ ಮಾತುಕತೆ, ವಿಚಾರ ವಿನಿಮಯ ನಡೆಸಿದ ಬಳಿಕ ಸಂಘ ಅಸ್ತಿತ್ವಕ್ಕೆ ಬಂತು.

ಸಂಘದ ಸಂಸ್ಥಾಪಕ ಅಧ್ಯಕ್ಷರಾದವರು `ರ್ಯಾಶನಲಿಸ್ಟ್‘ ಪತ್ರಿಕೆಯ ಸಂಪಾದಕರಾಗಿದ್ದ ಜಿ. ಆರ್. ಜೋಷ್ಯರ್ ಅವರು. `ಸತ್ಯವಾದಿ‘ ಪತ್ರಿಕೆಯ ಸಂಪಾದಕರಾಗಿದ್ದ ಟಿ. ಕೃಷ್ಣರಾವ್ ಉಪಾಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ವರದಿಗಾರರಾಗಿದ್ದ ಕೆ. ಜೀವಣ್ಣರಾವ್ ಚುನಾಯಿತರಾದರು. ಸ್ಥಾಪಕ ಸದಸ್ಯರ ಪೈಕಿ ಖ್ಯಾತ ಇಂಗ್ಲಿಷ್ ಲೇಖಕ ಆರ್.ಕೆ. ನಾರಾಯಣ್ ಕೂಡ ಒಬ್ಬರು ಎಂಬುದು ಸಂಘದ ಹೆಮ್ಮೆಗಳಲ್ಲೊಂದು. ಆಗ ಅವರ ವಯಸ್ಸು 28 ವರ್ಷಗಳು.

Mysore District Journalist Association - MDJA(圖3)-速報App

ಸಂಘದ ಉದ್ಘಾಟನಾ ಮಹೋತ್ಸವಕ್ಕೆಂದು ಸ್ವಾತಂತ್ರೃ ಹೋರಾಟಗಾರ್ತಿ, `ಭಾರತದ ಕೋಗಿಲೆ‘, ಭಾರತೀಯ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷೆ ಶ್ರೀಮತಿ ಸರೋಜಿನಿ ನಾಯ್ಡು ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಸಮಯಾಭಾವದಿಂದ ನಾಯ್ಡು ಅವರು ಸಮಾರಂಭಕ್ಕೆ ಆಗಮಿಸಲು ಆಗಲಿಲ್ಲ. ಆದರೆ ಅವರು ಸಂಘಕ್ಕೆ ಶುಭಾಶಯಗಳನ್ನು ಕೋರಿ ಟೆಲಿಗ್ರಾಂ ಸಂದೇಶ ಕಳುಹಿಸಿದ್ದರು. ಅವರ ಅನುಪಸ್ಥಿತಿಯಲ್ಲಿ ಸಂಘವು ಸರಳವಾಗಿ ಮೈಸೂರಿನ ಡಿ. ಸುಬ್ಬಯ್ಯ ರಸ್ತೆಯಲ್ಲಿದ್ದ ಅಗರಂ ರಂಗಯ್ಯನವರ ನಿವಾಸ `ಶ್ರೀರಾಮ’ದಲ್ಲಿ ಉದ್ಘಾಟನೆಗೊಂಡಿತು. ನಂತರ ಸಂಘದ ಕಚೇರಿ ಲ್ಯಾನ್ಸ್‍ಡೌನ್ ಕಟ್ಟಡದ ಮಹಡಿಗೆ ಸ್ಥಳಾಂತರಗೊಂಡಿತು.

ಸಂಘಕ್ಕೆ ಶುಭಾಶಯಗಳನ್ನು ಕೋರಿ ಶ್ರೀಮತಿ ಸರೋಜಿನಿ ನಾಯ್ಡು ಅವರು ಕಳುಹಿಸಿದ್ದ ಸಂದೇಶದ ಸಾರ ಹೀಗಿತ್ತು: `ಆಧುನಿಕ ಕಾಲದಲ್ಲಿ ಪತ್ರಕರ್ತರು ಸಾರ್ವಜನಿಕರ ಭಾವನೆಗಳನ್ನು ಒಳ್ಳೆಯದಾಗಿ ಅಥವಾ ಕೆಟ್ಟದಾಗಿಯೂ ರೂಪಿಸುವರು ಎಂದು ನಾನು ನಂಬಿದ್ದೇನೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತನೂ ತನ್ನ ಕರ್ತವ್ಯದಲ್ಲಿ ಎಚ್ಚರತಪ್ಪದೆ ತಂತಮ್ಮ ಪ್ರತಿಭೆಯನ್ನು ಉದಾತ್ತವಾಗಿ ನಿರ್ವಹಿಸಿಕೊಳ್ಳಬೇಕಾಗಿದೆ. ಈ ವಿಶೇಷತೆಗೆ ನಿಜಕ್ಕೂ ಮೈಸೂರು ಪತ್ರಕರ್ತರ ಸಂಘ ಒಳ್ಳೆಯ ಉದಾಹರಣೆಯಾಗಿದೆ. ಈ ಸಂಘದ ಅಧ್ಯಕ್ಷರಾದ ಜಿ. ಆರ್. ಜೋಷ್ಯರ್ ಅವರು ಪತ್ರಿಕಾ ಕಾನೂನು ದೇಶದ ಪತ್ರಿಕೆಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದಿರುವುದನ್ನು ತಾನೂ ಒಪ್ಪಿ ಇದರ ನಿವಾರಣೆಗೆ ಸೂಕ್ತ ವೇದಿಕೆಗಳನ್ನು ಬಳಸಿಕೊಳ್ಳಬೇಕಾದ ಅಗತ್ಯವಿದೆ. ಕಾನೂನು ತಪ್ಪಾಗಿದ್ದರೂ ಅದನ್ನು ಸಮಗ್ರವಾಗಿ ಬದಲಿಸಬೇಕಾದ ಅಗತ್ಯವಿದೆ. ಭವಿಷ್ಯದ ದಿನಗಳಲ್ಲಿ ಮೈಸೂರು ರಾಜ್ಯದ ಪತ್ರಕರ್ತರು ಪ್ರಮುಖ ಪಾತ್ರವನ್ನು ಆಂಗ್ಲ ಸಹೋದ್ಯೋಗಿಗಳೊಂದಿಗೆ ನಿರ್ವಹಿಸಬೇಕಾದ ನಿಚ್ಚಳ ವಾತಾವರಣ ಕಂಡುಬರುತ್ತಿದೆ.

Mysore District Journalist Association - MDJA(圖4)-速報App

ನಂತರ ಸಂಘದ ಏಳ್ಗೆಗಾಗಿ ಅನೇಕ ಮಹನೀಯರು ಸಾಕಷ್ಟು ಶ್ರಮಿಸಿದ್ದಾರೆ, ಅನೇಕರು ಅನೇಕ ಬಗೆಯಲ್ಲಿ ನೆರವಾಗಿದ್ದಾರೆ. ಸಂಘಕ್ಕೆ ಆರ್ಥಿಕ ಶಕ್ತಿಯನ್ನು ತರಲು ಸಂಘದ ಪದಾಧಿಕಾರಿಗಳೇ ನೂರು ರೂಪಾಯಿಗಳನ್ನು ಕ್ರೂಡೀಕರಿಸಿದ್ದೂ ಉಂಟು. ನಾಡಿನ ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣನವರು ಸಹಾಯಾರ್ಥ ನಾಟಕ ಪ್ರದರ್ಶಿಸಿ ಒಂದು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಸಂಘಕ್ಕೆ ದೇಣಿಗೆಯನ್ನಾಗಿ ನೀಡಿದ್ದಾರೆ. ರಂಗಭೂಮಿಯಂತಹ ಮಾಧ್ಯಮವೊಂದು ಮತ್ತೊಂದು ಮಾಧ್ಯಮರಂಗಕ್ಕೆ ಹೆಗಲೆಣೆಯಾಗಿ ನಿಂತ ಐತಿಹಾಸಿಕ ಘಟನೆಯಿದು. ದೇಶಕ್ಕೆ ಸ್ವಾತಂತ್ರೃ ಬಂದ ವರ್ಷವೇ ಅಂದಿನ ಸಿಐಟಿಬಿ ಸಂಘ ಕೇವಲ ಒಂದು ರೂಪಾಯಿ ಪಾವತಿಸಿಕೊಂಡು ಸಂಘಕ್ಕೆ ಉಚಿತ ನಿವೇಶನ ನೀಡಿತು.

ಆ ನಿವೇಶನದಲ್ಲೇ ಎದ್ದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ `ಮೈಸೂರು ಜಿಲ್ಲಾ ಪತ್ರಕರ್ತರ ಸಂಘ’ ಇಂದು ನಾಡಿನ ಹೆಮ್ಮೆಯ ಪತ್ರಕರ್ತರ ಸಂಘಗಳಲ್ಲೊಂದೆನ್ನಿಸಿದೆ. ದಕ್ಷತೆ, ಪಾರದರ್ಶಕತೆ, ಪ್ರಾಮಾಣಿಕ ನಡಾವಳಿಗಳ ಮೂಲಕ ಮುನ್ನಡೆಯುತ್ತಿರುವ ಸಂಘ ಇನ್ನೂ ಎತ್ತರಕ್ಕೆ ಬೆಳೆಯುವ ಮೂಲಕ ಪತ್ರಕರ್ತರ ಘನತೆಯನ್ನು ಎತ್ತಿಹಿಡಿಯುವ ಮಹಾತ್ವಾಕಾಂಕ್ಷೆಯೊಂದಿಗೆ, ಹಲವಾರು ಕನಸುಗಳನ್ನೂ ಹೊಂದಿದೆ.

Mysore District Journalist Association - MDJA(圖5)-速報App